	ನ್ಯೂ ಲಂಡನ್   -		
ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನೆಕ್ಟಿಕಟ್ ರಾಜ್ಯದ ಆಗ್ನೇಯ ಭಾಗದಲ್ಲಿರುವ ನಗರ. ತೇಮ್ಸ್ ನದಿಯ ಮುಖದಲ್ಲಿ ಲಾಂಗ್ ಐಲೆಂಡ್ ಸೌಂಡ್‍ನ (ಜಲಸಂಧಿ) ಮೇಲಿರುವ ಬಂದರು. ಉ.ಅ.41 ಡಿಗ್ರಿ 21' ಮತ್ತು ಪ.ರೇ 72807' ನಲ್ಲಿದೆ. ನಗರದ ಜನಸಂಖ್ಯೆ 31,630(1970). ಅಟ್ಲಾಂಟಿಕ್ ತೀರದ ಅತ್ಯಂತ ಆಳವಾದ ರೇವುಗಳ ಪೈಕಿ ಇಲ್ಲಿಯದೂ ಒಂದು. 1646ರಲ್ಲಿ ಇದು ಸ್ಥಾಪಿತವಾಯಿತು. 1658ರ ವರೆಗೂ ಇದಕ್ಕೆ ಪೆಕ್ವಿಡ್ ಎಂದು ಹೆಸರಿತ್ತು.  ಅಮೆರಿಕನ್ ಕ್ರಾಂತಿಯ ಸಮಯದಲ್ಲಿ ಬ್ರಿಟಿಷ್ ಸೇನೆ ಇದರ ಮೇಲೆ ದಾಳಿ ನಡೆಸಿತ್ತು. 1784ರಲ್ಲಿ ಇಲ್ಲಿ ತಿಮಿಂಗಿಲ ಹಿಡಿಯುವ ಉದ್ಯಮ ಸ್ಥಾಪಿತವಾಯಿತು. 1846ರವರೆಗೂ ಇದು ಪ್ರವರ್ಧಮಾನವಾಗಿತ್ತು. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ತೀರ ರಕ್ಷಾಪಡೆಯ ಅಕಾಡೆಮಿ (1932) ಇದೆ. ಇದು ಅಮೆರಿಕದ ಜಲಾಂತರ್ಗಾಮಿ ನೌಕಾ ನೆಲೆ ಇಲ್ಲಿ ಅಮೆರಿಕನ್ ನೌಕೆಯ ಪ್ರಯೋಗಶಾಲೆಯಿದೆ. ಪರಮಾಣು ಚಾಲಿತ. ಜಲಾಂತರ್ಗಾಮಿ ನೌಕೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಕನೆಕ್ಟಿಕಟ್ ಮಹಿಳಾ ಕಾಲೇಜು(1911) ಮಿಚೆಲ್ ಕಾಲೇಜು(1938) ಇವು ಇಲ್ಲಿಯ ಪ್ರಮುಖ ಶಿಕ್ಷಣ ಸಂಸ್ಥೆಗಳು ತೇಮ್ಸ್ ನದಿಯ ಮೇಲಣ ಯೇಲ್-ಹಾರ್ವರ್ಡ್ ವಾರ್ಷಿಕ ದೋಣಿ ಸ್ಪರ್ಧೆ ಇಲ್ಲಿ ಮುಕ್ತಾಯಗೊಳ್ಳುತ್ತದೆ.      (ಪಿ.ಬಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ